﻿ಕೀರ್ತನೆಗಳು.
150.
ಯೆಹೋವ ದೇವರಿಗೆ ಸ್ತೋತ್ರ! ದೇವರನ್ನು ಅವರ ಪರಿಶುದ್ಧಾಲಯದಲ್ಲಿ ಸ್ತುತಿಸಿರಿ; ದೇವರ ಶಕ್ತಿದಾಯಕ ಆಕಾಶಮಂಡಲದಲ್ಲಿ ಅವರನ್ನು ಸ್ತುತಿಸಿರಿ. 
ದೇವರ ಮಹತ್ಕಾರ್ಯಗಳಿಗಾಗಿ ಅವರನ್ನು ಸ್ತುತಿಸಿರಿ; ದೇವರ ಮಹಾಪ್ರಭಾವಗಳಿಗಾಗಿ ಅವರನ್ನು ಸ್ತುತಿಸಿರಿ. 
ತುತೂರಿಯ ಶಬ್ದದಿಂದ ದೇವರನ್ನು ಸ್ತುತಿಸಿರಿ, ಕಿನ್ನರಿಯಿಂದಲೂ, ವೀಣೆಯಿಂದಲೂ, ಅವರನ್ನು ಸ್ತುತಿಸಿರಿ. 
ದಮ್ಮಡಿಯಿಂದಲೂ, ನಾಟ್ಯದಿಂದಲೂ ದೇವರನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ, ಕೊಳಲುಗಳಿಂದಲೂ ಅವರನ್ನು ಸ್ತುತಿಸಿರಿ. 
ತಾಳಗಳಿಂದ ದೇವರನ್ನು ಸ್ತುತಿಸಿರಿ; ಪ್ರತಿಧ್ವನಿಸುವ ಝಲ್ಲರಿಗಳಿಂದಲೂ ಅವರನ್ನು ಸ್ತುತಿಸಿರಿ. 
ಶ್ವಾಸವುಳ್ಳದ್ದೆಲ್ಲಾ ಯೆಹೋವ ದೇವರನ್ನು ಸ್ತುತಿಸಲಿ. ಯೆಹೋವ ದೇವರಿಗೆ ಸ್ತೋತ್ರ!
